ನಾನು Google ಟೋನ್‌ ಬಳಸುವುದು ಹೇಗೆ?

Google ಟೋನ್‌ ಬಳಸಿಕೊಂಡು URL ಪ್ರಸಾರ ಮಾಡಲು:

  • ನಿಮ್ಮ Google ಖಾತೆಗೆ ಲಾಗಿನ್‌ ಮಾಡಿ.
  • ನೀವು ಪ್ರಸಾರ ಮಾಡಲು ಬಯಸುವ ವೆಬ್‌ ಪುಟದಲ್ಲಿರುವಾಗ ನಿಮ್ಮ Chrome ಬ್ರೌಸರ್‌ನಲ್ಲಿನ Google ಟೋನ್‌ ಐಕಾನ್‌ ಕ್ಲಿಕ್‌ ಮಾಡಿ.

Google ಟೋನ್‌ ಏಕೆ?

Google ಟೋನ್‌, ನಾವು ಪರಸ್ಪರ ಮಾತನಾಡುವಂತೆ ಕಂಪ್ಯೂಟರ್ ಸಂವಹನಕ್ಕೆ ಸಹಾಯ ಮಾಡುತ್ತದೆ. ಇದು ಇತರ ಕಂಪ್ಯೂಟರ್‌ನ ಮೈಕ್ರೊಫೋನ್‌ಗಳನ್ನು URL ನಂತೆ ಗುರುತಿಸಲು ವಿಶೇಷ ಧ್ವನಿ ಸಹಿಯನ್ನು ರಚಿಸಲು ನಿಮ್ಮ ಕಂಪ್ಯೂಟರ್‌ನ ಸ್ಪೀಕರ್‌ಗಳನ್ನು Chrome ಬಳಸಲು ಅನುಮತಿಸುವ ಬ್ರೌಸರ್‌ ವಿಸ್ತರಣೆಯಾಗಿದೆ.

Google ಟೋನ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ?

Google ಟೋನ್‌ ನಿಮ್ಮ ಕಂಪ್ಯೂಟರ್‌ನ ಮೈಕ್ರೊಫೋನ್ ಅನ್ನು ಆನ್ ಮಾಡುತ್ತದೆ (ವಿಸ್ತರಣೆಯು ಆನ್ ಆಗಿರುವಾಗ). Google ಟೋನ್‌ ತಾತ್ಕಾಲಿಕವಾಗಿ Google ಸರ್ವರ್‌ಗಳಲ್ಲಿ URL ಸಂಗ್ರಹಿಸುತ್ತದೆ ಮತ್ತು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಹತ್ತಿರದ ಕಂಪ್ಯೂಟರ್‌ಗಳಿಗೆ ಅದನ್ನ ಕಳುಹಿಸಲು ನಿಮ್ಮ ಕಂಪ್ಯೂಟರ್‌ನ ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್‌ಗಳನ್ನು ಬಳಸುತ್ತದೆ. Google ಟೋನ್‌ ವಿಸ್ತರಣೆ ಹೊಂದಿರುವ, ಕೂಗಳತೆ ದೂರವಿರುವ ಹಾಗೂ ಆನ್‌ ಆಗಿರುವ ಯಾವುದೇ ಕಂಪ್ಯೂಟರ್‌‌ Google ಟೋನ್‌ ಅಧಿಸೂಚನೆಗಳನ್ನು ಸ್ವೀಕರಿಸಬಹುದು. ಅಧಿಸೂಚನೆಯು ನಿಮ್ಮ Google ಪ್ರೊಫೈಲ್‌ ಹೆಸರು ಮತ್ತು ಚಿತ್ರದೊಂದಿಗೆ URL ಪ್ರದರ್ಶಿಸುತ್ತದೆ.

Google ಟೋನ್‌ ಮೂಲಕ URL ಸ್ವೀಕರಿಸಲು, Chrome ನಿಮ್ಮ ಮೈಕ್ರೊಫೋನ್ ಅನ್ನು ಆನ್ ಆಗಿ ಇರಿಸಿಕೊಳ್ಳಬೇಕಾಗಿರುತ್ತದೆ. ಗದ್ದಲದ ಸ್ಥಳಗಳು, ಹೆಚ್ಚು ಅಂತರ, ಕಳಪೆ ಇಂಟರ್ನೆಟ್‌ ಸಂಪರ್ಕ ಅಥವಾ ಮೈಕ್ರೊಫೋನ್‌ ಇಲ್ಲದ ಕಂಪ್ಯೂಟರ್‌ಗಳು ಅಥವಾ Google ಟೋನ್‌ ಮೂಲಕ ಧ್ವನಿ ಪ್ರಸಾರ ಪತ್ತೆಹಚ್ಚುವಲ್ಲಿ ಅಸಮರ್ಥವಾಗಿರುವಂತಹ ಮೈಕ್ರೊಫೋನ್ ಆಗಿದ್ದರೆ Google ಟೋನ್‌ ಕಾರ್ಯನಿರ್ವಹಿಸದಿರಬಹುದು.

Google ಟೋನ್‌ ನನ್ನ ಡೇಟಾವನ್ನು ಹೇಗೆ ಬಳಸುತ್ತದೆ?

Google ನ ಗೌಪ್ಯತೆ ನೀತಿಗೆ ಅನುಗುಣವಾಗಿ Google ಟೋನ್‌ ಅನಾಮಧೇಯ ಬಳಕೆಯ ಡೇಟಾ ಸಂಗ್ರಹಿಸುತ್ತದೆ.

ನಾನು ಅದನ್ನು ಆನ್‌ ಮತ್ತು ಆಫ್‌ ಮಾಡುವುದು ಹೇಗೆ?

Google ಟೋನ್‌ ಆನ್‌ ಮತ್ತು ಆಫ್‌ ಮಾಡಲು (ಮೈಕ್ರೊಫೋನ್‌ ಸೇರಿದಂತೆ), Chrome ವಿಸ್ತರಣೆ ಸೆಟ್ಟಿಂಗ್‌ಗಳಿಗೆ ಹೋಗಿ.

ಇದು ಸುರಕ್ಷಿತವೇ?

Google ಟೋನ್‌ URL ಗಳನ್ನು ಮಾತ್ರ ಪ್ರಸಾರ ಮಾಡುತ್ತದೆ, ಈ ಮೂಲಕ ಸ್ವೀಕರಿಸುವವರು ಸಾಮಾನ್ಯವಾಗಿ ಪ್ರವೇಶವನ್ನು ಹೊಂದಿಲ್ಲದಿರುವ ಪುಟಕ್ಕೆ ಸ್ವಯಂಚಾಲಿತವಾಗಿ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ Gmail ಇನ್‌ಬಾಕ್ಸ್‌ URL ಅನ್ನು ನೀವು ಪ್ರಸಾರ ಮಾಡಿದರೆ, ಉದಾಹರಣೆಗೆ, Google ಟೋನ್‌ ಅಧಿಸೂಚನೆಗಳ ಮೇಲೆ ಕ್ಲಿಕ್‌ ಮಾಡುವ ಸ್ವೀಕರಿಸುವವರಿಗೆ ಅವರ Gmail ನಲ್ಲಿ ಲಾಗ್ ಮಾಡಲು ಸೂಚಿಸಲಾಗುತ್ತದೆ. ಆದಾಗ್ಯೂ, Google ಟೋನ್‌ ಪ್ರಸಾರಗಳು ವಿನ್ಯಾಸದ ರೂಪದಲ್ಲಿ ಸಾರ್ವಜನಿಕವಾಗಿದೆ, ಹಾಗಾಗಿ ಗೌಪ್ಯತೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳದಿರುವುದು ಒಳ್ಳೆಯದು.